ಹೊಸ ಕೌಟುಂಬಿಕ ಗೇಮ್ ಶೋ ಇಂಡಿಯಾ ಕೆ ಟಾಪ್ ೧ ನಿರೂಪಿಸಲಿರುವ ಅನಿಲ್ ಕಪೂರ್

ಹೊಸ ಕೌಟುಂಬಿಕ ಗೇಮ್ ಶೋ ಇಂಡಿಯಾ ಕೆ ಟಾಪ್ ೧ ನಿರೂಪಿಸಲಿರುವ ಅನಿಲ್ ಕಪೂರ್ **ಹೊಸ ಕೌಟುಂಬಿಕ ಗೇಮ್ ಶೋ ‘ಇಂಡಿಯಾ ಕೆ ಟಾಪ್ ೧’ ನಿರೂಪಿಸಲಿರುವ ಅನಿಲ್ ಕಪೂರ್**

*ಮುಂಬೈ, ಆ. ೭: ಹಿರಿಯ ನಟ ಅನಿಲ್ ಕಪೂರ್ ಅವರು ಮುಂಬರುವ ಕೌಟುಂಬಿಕ ಗೇಮ್ ಶೋ **‘ಇಂಡಿಯಾ ಕೆ ಟಾಪ್ ೧%’** ಅನ್ನು ನಿರೂಪಿಸಲಿದ್ದು, ಈ ಕಾರ್ಯಕ್ರಮ ಸೆಪ್ಟೆಂಬರ್ ೫ರಂದು ಪ್ರಸಾರವಾಗಲಿದೆ.

ನಿರ್ಮಾಪಕರ ಪ್ರಕಾರ, ‘ಇಂಡಿಯಾ ಕೆ ಟಾಪ್ ೧%’ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ **‘ದಿ ೧% ಕ್ಲಬ್’** ಕಾರ್ಯಕ್ರಮದ ಭಾರತೀಯ ಆವೃತ್ತಿಯಾಗಿದೆ. ನೆದರ್ಲೆಂಡ್ಸ್, ಜರ್ಮನಿ, ಸ್ಪೇನ್, ಗ್ರೀಸ್, ಆಸ್ಟ್ರೇಲಿಯಾ, ಇಸ್ರೇಲ್, ಟರ್ಕಿ, ಉಕ್ರೇನ್, ಮೆಕ್ಸಿಕೊ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ.

ಸಾಂಪ್ರದಾಯಿಕ ಕ್ವಿಜ್ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ‘ಇಂಡಿಯಾ ಕೆ ಟಾಪ್ ೧%’ ಸಾಮಾನ್ಯ ಜ್ಞಾನಕ್ಕಿಂತ **ತಾರ್ಕಿಕ ಚಿಂತನೆ, ಸೂಕ್ಷ್ಮ ಅವಲೋಕನ, ಸಾಮಾನ್ಯ ಜ್ಞಾನ ಮತ್ತು ಸಮಯಪ್ರಜ್ಞೆ**ಯನ್ನು ಪರೀಕ್ಷಿಸಲಿದೆ. ಇಡೀ ಕುಟುಂಬವೇ ಒಟ್ಟಾಗಿ ಭಾಗವಹಿಸಬಹುದಾದ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪ್ರೇಕ್ಷಕರು ತಮ್ಮ ಮನೆಯಲ್ಲೇ ಕುಳಿತು ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಅವಕಾಶವನ್ನೂ ಹೊಂದಿರುತ್ತಾರೆ.

ಕಾರ್ಯಕ್ರಮದ ಪ್ರಸಾರ ದಿನಾಂಕವನ್ನು ಪ್ರಕಟಿಸಿದ ಅನಿಲ್ ಕಪೂರ್, **‘ಇಂಡಿಯಾ ಕೆ ಟಾಪ್ ೧%’ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ. ಇಲ್ಲಿ ಎಷ್ಟು ತಿಳಿದಿದ್ದೀರಿ ಎಂಬುದಕ್ಕಿAತ ಹೇಗೆ ಯೋಚಿಸುತ್ತೀರಿ ಎಂಬುದು ಮುಖ್ಯ** ಎಂದು ಹೇಳಿದರು.

ಕಾರ್ಯಕ್ರಮದ ಪ್ರತಿಯೊಂದು ಸವಾಲು ಸ್ಪರ್ಧಿಗಳ ತಾರ್ಕಿಕ ಸಾಮರ್ಥ್ಯ, ಅವಲೋಕನ ಕೌಶಲ್ಯ ಹಾಗೂ ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ಮತ್ತು ಸ್ಥಿರವಾಗಿ ಉಳಿಯುವ ಸಾಮರ್ಥ್ಯವನ್ನು ಪರೀಕ್ಷಿಸಲಿದೆ ಎಂದು ಅವರು ತಿಳಿಸಿದರು.

ಮನೆಯಲ್ಲೇ ಕುಳಿತು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಮ್ಮ ಚಿಂತನಾ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವಂತೆ ಪ್ರೇಕ್ಷಕರಿಗೆ ಕರೆ ನೀಡಿದ ಅನಿಲ್ ಕಪೂರ್, ಆಸಕ್ತರು ಕಾರ್ಯಕ್ರಮಕ್ಕೆ ನೋಂದಾಯಿಸಿಕೊAಡು ಈ ಸವಾಲಿನ ಭಾಗವಾಗುವಂತೆ ಮನವಿ ಮಾಡಿದರು.